ದೆಹಲಿಯ ಬಿಜೆಪಿ ಸರ್ಕಾರದಿಂದ ಗ್ಯಾರಂಟಿ ಯೋಜನೆ ಜಾರಿ.

Politics National

Posted on 21-02-2025 |

Share: Facebook | X | Whatsapp | Instagram


ದೆಹಲಿಯ ಬಿಜೆಪಿ ಸರ್ಕಾರದಿಂದ  ಗ್ಯಾರಂಟಿ ಯೋಜನೆ ಜಾರಿ.

ದೆಹಲಿಯ ಬಿಜೆಪಿ ಸರ್ಕಾರದಿಂದ  ಗ್ಯಾರಂಟಿ ಯೋಜನೆ ಜಾರಿ.

ದೆಹಲಿಯಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ನೂತನ ಮುಖ್ಯಮಂತ್ರಿಯಾಗಿ ರೇಖಾಗುಪ್ತ ಮತ್ತು ಆರು ಸಚಿವರು ಸಂಪುಟ ದರ್ಜೆಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕೇಜ್ರಿ ವಾಲ್ ರವರನ್ನು ಸೋಲಿಸಿದ ಪರ್ವೇಶ್ ವರ್ಮಾ, ಕಪಿಲ್ ಮಿಶ್ರ. ಮಂಜಿಂದರ್  ಸಿಂಗ್, ಆಶಿಶ್ ಸೂದ್ ರವೀಂದ್ರ ಸಿಂಗ್ ಪಂಕಜ್ ಸಿಂಗ್ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ 

ಮುಖ್ಯಮಂತ್ರಿ ರೇಖಾ ಗುಪ್ತ ಮಾತನಾಡಿ ನಾವು ಚುನಾವಣೆ ಸಮಯದಲ್ಲಿ ಭರವಸೆ ನೀಡಿದ ಗ್ಯಾರಂಟಿ ಯೋಜನೆಯನ್ನು ಖಂಡಿತ ನೀಡುತ್ತೇವೆ. ಮಹಿಳೆಯರಿಗೆ ತಿಂಗಳಿಗೆ 2,500 ರೂ ಹಣವನ್ನು ನಮ್ಮ ಸರ್ಕಾರ ಮಾರ್ಚ್ 8ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ತಾರೀಖಿನಿಂದ ನೀಡಲಿದೆ.

ಮೋದಿ ಅವರ ಕನಸನ್ನು ನನಸಾಗಿಸುವುದು ನಮ್ಮ ಜವಾಬ್ದಾರಿ ಎಂದರು ನಂತರ ಯಮುನಾ ನದಿಯ ತೀರಕ್ಕೆ ಹೋಗಿ ಸಂಪುಟದ ಸದಸ್ಯರೊಂದಿಗೆ ಯಮುನಾ ಆರತಿಯನ್ನು ಮಾಡಿದರು.

Search