Posted on 18-02-2025 |
Share: Facebook | X | Whatsapp | Instagram
ಹೊಸನಗರ : ದಿನಾಂಕ 18 2 25 ರ ಮಂಗಳವಾರ ತ್ರಿಣೀವೆ ತ್ರಿಪುರ ಸಂಜೀವಿನಿ ಒಕ್ಕೂಟದ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯಿತಿ ಮತ್ತು ಕಸಾಪ ಹೊಸನಗರ ತಾಲೂಕು ಆಯೋಜಿಸಿದ್ದ ಗೋಪಾಲಕೃಷ್ಣ ಅಡಿಗರ ಒಂದು ನೆನಪು ಕಾರ್ಯಕ್ರಮವು ಅರ್ಥಪೂರ್ಣವಾಗಿತ್ತು
ಉಪನ್ಯಾಸ ನೀಡಿದ ಶ್ರೀ ಡಿಎಸ್ ರಾಘವೇಂದ್ರ ನಿಕಟಪೂರ್ವ ಗ್ರಂಥ ಪಾಲಕರು ಗೋಪಾಲಕೃಷ್ಣ ಆಡಿಗರು ನವ್ಯ ಸಾಹಿತ್ಯವನ್ನು ಬೆಳಕಿಗೆ ತಂದ ಮೊದಲ ವ್ಯಕ್ತಿ ಇಂಗ್ಲಿಷ್ ಕವಿಗಳಾದ ಇಲಿಯಟ್ ರ ಸಮನಾಗಿ ಕವಿತೆ ಬರೆದವರು ಕುವೆಂಪು ಕಾರಂತರೇ ಮೊದಲಾದ ಅವರ ಕವಿತೆಯನ್ನು ಮೆಚ್ಚಿ ಪ್ರಶಂಸಿದ್ದರು
ವಿಶಾಲವಾದ ವಿಸ್ತಾರವಾದ ಮನಸ್ಸಿನ ಭಾವನೆಗಳನ್ನು ಕ್ಲಿಷ್ಟಕರವಾಗಿ ಬರೆದು ಎಲ್ಲರು ಅರ್ಥ ಮಾಡಿಕೊಳ್ಳುವುದು ಕಷ್ಟವೇ ಹೊರತು ಕವಿತೆಯಲ್ಲಿ ಕಾಠಿಣ್ಯತೆ ಇಲ್ಲ
ಹಿಮಾಲಯ ಪರ್ವತವು ಎತ್ತರದಲ್ಲಿದೆ ಅದನ್ನು ಏರಲು ಸಾಮರ್ಥ್ಯ ಬೇಕೆ ಹೊರತು ಹಿಮಾಲಯ ಪರ್ವತ ಕಠಿಣ ವೆಂದೇನು ಅಲ್ಲ ಎಂಬುದು ಅಡಿಗರ ಅಭಿಮಾನಿಗಳ ಅಭಿಮತ ಎಂದು ವಿವರಿಸಿದರು
ಜಿಎನ್ ಬಸಪ್ಪ ಗೌಡರು ಅಡಿಗರ ಶಿಷ್ಯರು ಅಡಿಗರ ಕವಿತೆಗಳನ್ನು ತಮ್ಮ ಕಾಲೇಜ್ ದಿನಗಳನ್ನು ನೆನಪಿಸಿಕೊಂಡರು
ಕುಮಾರಿ ರಂಜಿತಾ ಪಿಡಿಒ ತ್ರಿಣಿವೆ ಗ್ರಾಮ ಪಂಚಾಯಿತಿ ಮಾತನಾಡಿ ಇಂಥ ಸಾಹಿತ್ಯ ಕಾರ್ಯಕ್ರಮಗಳು ನಮ್ಮ ಮನಸ್ಸಿಗೆ ಮುಧ ನೀಡುವುದಲ್ಲದೆ ಅಡಿಗರಂತಹ ಹಿರಿಯ ಸಾಹಿತಿಗಳ ಪರಿಚಯವಾಗುವುದು ನಮ್ಮ ಭಾಗ್ಯ ಎಂದು ಸಂತೋಷ ವ್ಯಕ್ತಪಡಿಸಿದರು
ಶ್ರೀ ಜಿಎನ್ ಬಸಪ್ಪ ಗೌಡರು ಅಡಿಗರ ಶಿಷ್ಯರು ಮತ್ತು ಅಭಿಮಾನಿಗಳು ಆದ ಕಾರಣ ಅವರನ್ನು ಸನ್ಮಾನಿಸಲಾಯಿತು
ಶ್ರೀಮತಿ ಮಿತ್ರ , ಕುಮಾರಿ ಭಾರತಿ , ಶ್ರೀಮತಿ ಸುಜಾತ ಭಾವಗೀತೆಗಳನ್ನು ಹಾಡಿದರು
ಶ್ರೀಮತಿ ಸುಪ್ರೀತ ಪ್ರಾರ್ಥಿಸಿ ಶ್ರೀಮತಿ ಶುಭಾ ದಿನೇಶ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು
ತಾಲೂಕು ತ್ರಿಣೀವೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಆದ ಶ್ರೀಮತಿ ಲೀಲಾವತಿ ಶ್ರೀ ಶ್ರೀನಿವಾಸ ಗೌಡ ಶ್ರೀ ಕೃಷ್ಣಮೂರ್ತಿ
ಮತ್ತು ಗ್ರಾಮಸ್ಥರಾದ ಶ್ರೀ ಶಿವಾನಂದಪ್ಪ ಶ್ರೀ ಸತ್ಯನಾರಾಯಣ ಆಚ್ಚಾರ್ ಇನ್ನೂ ಇತರರು ಭಾಗವಹಿಸಿದ್ದರು