ನಾ.ಡಿಸೋಜ ಕೇವಲ ಒಬ್ಬ ಸಾಹಿತಿ ಅಲ್ಲ ಸಂಸ್ಕೃತಿಯ ಕಿಡಿ

ಹೊಸನಗರ ಲೋಕಲ್

Posted on 02-02-2025 |

Share: Facebook | X | Whatsapp | Instagram


ನಾ.ಡಿಸೋಜ ಕೇವಲ ಒಬ್ಬ ಸಾಹಿತಿ ಅಲ್ಲ ಸಂಸ್ಕೃತಿಯ ಕಿಡಿ

 

ಹೊಸನಗರ. ಪೆ.2. ನಾ.ಡಿಸೋಜರವರು ಕೇವಲ ಒಬ್ಬ ಸಾಹಿತಿ ಅಲ್ಲ ಅವರು ಮಲೆನಾಡಿನ ಸಾಂಸ್ಕೃತಿಕ ಕಿಡಿ.ಎಂದು ಸಿನಿಮಾ ನಿರ್ದೇಶಕ ಗಾರ್ಗಿ ಕಾರೇಹಕ್ಲು ಹೇಳಿದರು.ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ನಾಡು ನುಡಿ ಸಂಸ್ಕೃತಿ ಕಾರ್ಯಕ್ರಮ ಮತ್ತು ನಾ ಡಿಸೋಜ ಸಾಕ್ಷ್ಯ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ನಾ.ಡಿಸೋಜ ನಾಗರಿಕತೆ ಹೆಸರಿನಲ್ಲಿ ಪ್ರಕೃತಿ ಮೇಲೆ ನಡೆಯುವ ಅತ್ಯಾಚಾರ ಸಂಸ್ಕೃತಿ ಮುಳುಗಿಸುವ ಕಾರ್ಯವನ್ನು ಕಂಡು ತಮ್ಮ ಸಾಹಿತ್ಯದ ಮೂಲಕ ಈ ಅನಾಚಾರ ದಾಖಲಿಸುವ ಕಾರ್ಯ ಮಾಡಿದರು.ಹಾಗಾಗಿ ಅವರ ಸಾಹಿತ್ಯ ಯಾವತ್ತು ಸ್ಮರಣೀಯ, ಇಂದು ನಾಗರೀಕತೆ ಹೆಸರಿನಲ್ಲಿ ಪರಿಸರ ನಾಶ ಮಾಡಿ ಕಾಂಕ್ರೀಟ್ ಕಾಡು ಬೆಳೆಸುತ್ತಿದ್ದೇವೆ ಎಂದರು.

ಪಶು ಸಂಗೋಪನ ಇಲಾಖೆ ಹೊಸನಗರದ ಬಿ.ಸಿ.ಕೃಷ್ಣೇಗೌಡ ಭಾವಗೀತೆ ಹಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.ಇದೇ ಸಂದರ್ಭದಲ್ಲಿ ವೈದ್ಯರಾದ ಡಾ.ಜಾನ್ ನಿರ್ದೇಶಕ ಗಾರ್ಗಿ ಕಾರೆಹಕ್ಲು ಸಹ ನಿರ್ಮಾಪಕ ಧನುಷ್ ಕುಮಾರ್ ರವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ  ಅಧ್ಯಕ್ಷತೆ ಯನ್ನು ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಗಣೇಶ್ ಮೂರ್ತಿ ವಹಿಸಿದ್ದರು.

ಪ್ರಾರ್ಥನೆ ಯನ್ನು  ಕೆ.ಸುರೇಶ್ ಕುಮಾರ್ ನಿರೂಪಣೆಯನ್ನು ಶ್ರೀ ಗಿರೀಶ್ ಸಂಪೆಮನೆ, ವಂದನಾರ್ಪಣೆ ಯನ್ನು ಕಾರ್ಯದರ್ಶಿ ಆರ್.ಕುಬೇಂದ್ರಪ್ಪ ನೆರವೇರಿಸಿದರು.ನಿರ್ವಹಣೆಯನ್ನು ಕಾರ್ಯದರ್ಶಿ ಕೆ.ಜಿ.ನಾಗೇಶ್ ಮಾಡಿದರು.

Search