ಧರ್ಮಸ್ಥಳ ಸ್ವ ಸಹಾಯ ಸಂಘದ ವಿರುದ್ಧ ಅಪಪ್ರಚಾರ ಸಂಘದಿಂದ ಮುಖ್ಯಮಂತ್ರಿಗೆ ದೂರು

ಹೊಸನಗರ ಲೋಕಲ್

Posted on 24-01-2025 |

Share: Facebook | X | Whatsapp | Instagram


ಧರ್ಮಸ್ಥಳ ಸ್ವ ಸಹಾಯ ಸಂಘದ ವಿರುದ್ಧ ಅಪಪ್ರಚಾರ ಸಂಘದಿಂದ ಮುಖ್ಯಮಂತ್ರಿಗೆ ದೂರು

ಹೊಸನಗರ ಜ. 24 ಇಲ್ಲಿನ ಧರ್ಮಸ್ಥಳ ಸ್ವಸಹಾಯ ಸಂಘದ ಚಟುವಟಿಕೆ ವಿರುದ್ಧ ಸಂಘದಲ್ಲಿ ಇದ್ದು ಸಾಲವನ್ನು ಪಡೆದು ಈಗ ಸಾಲವನ್ನು ಕಟ್ಟಲು ನಿರಾಕರಿಸಿ ಸಂಘದ ವಿರುದ್ಧವೇ ಅಪಪ್ರಚಾರದಲ್ಲಿ ತೊಡಗಿದ. ಕುಮಾರ ಉಪೇಂದ್ರ ಗಿರೀಶ್ ಮಂಜುನಾಥ ಗುರುಮೂರ್ತಿ ಲೋಕೇಶ್ ರಾಘವೇಂದ್ರ ಶೀನ ನಾಯಕ ಶ್ರೀಮತಿ ಚೈತ್ರ  ಶಿಲ್ಪ ಯಶೋಧ ಶಂಕರಪ್ಪ ಇವರ ಬಗ್ಗೆ ತಹಸಿಲ್ದಾರರಿಗೆ ಮತ್ತು ಮುಖ್ಯಮಂತ್ರಿಗೆ ಸಂಘದ ಸದಸ್ಯರುಗಳು ದೂರ ನೀಡಿದ್ದಾರೆ. ಇವರುಗಳು ಇದುವರೆಗೂ ಕೂಡ ತೆಗೆದುಕೊಂಡ ಸಾಲವನ್ನು ಹಿಂತಿರುಗಿಸಿಲ್ಲ. 

ಸಂಘವು ಪ್ರತಿವಾರ ಸಭೆಯನ್ನು ಕರೆಯುತ್ತದೆ ಹೊಸನಗರ ತಾಲೂಕಿನಲ್ಲಿ 3126 ಸ್ವಸಹಾಯ ಸಂಘಗಳಿದ್ದು ಈ ರೀತಿಯ ಕೆಲವೇ ವ್ಯಕ್ತಿಗಳ ಕೆಟ್ಟ ಮನಸ್ಥಿತಿಯಿಂದಾಗಿ ಉಳಿದವರಿಗೆ ಸಾಲ ದೊರೆಯುತ್ತಿಲ್ಲ ಹಾಗಾಗಿ ಇವರ ಬಗ್ಗೆ ಸರ್ಕಾರ ಕ್ರಮವನ್ನು ಕೈಗೊಂಡು ಸಾಲವನ್ನು ಮರುಪಾವತಿಸುವಂತೆ ಮಾಡಬೇಕು ಉಳಿದ ಬಡವರಿಗೆ ಅಗತ್ಯವಿದ್ದವರಿಗೆ ಸಾಲ ಸಿಗುವಂತೆ ಆಗಬೇಕು ಅಲ್ಲದೆ  17 ವರ್ಷದಿಂದ ನಿರಂತರವಾಗಿ ಯಾವುದೇ ತೊಂದರೆ ಇಲ್ಲದೆ ನಡೆಯುತ್ತಿರುವ ಸಂಘದ ಚಟುವಟಿಕೆ ಬಗ್ಗೆ  ಸುಳ್ಳು ಮಾಹಿತಿ ನೀಡಿ ಜಯಂತ ಟಿ ರವೀಂದ್ರ ಶೆಟ್ಟಿ ಗಿರೀಶ್ ಮಟ್ಟಣ್ಣ ಸಂತೋಷ್ ಶೆಟ್ಟಿ youtube ಮತ್ತು ಇತರೆ ಸಮೂಹ ಮಾಧ್ಯಮದಲ್ಲಿ ಸುಳ್ಳು ಮಾಹಿತಿಯನ್ನು ನೀಡುವುದಕ್ಕೆ ಕಾರಣರಾಗಿ ಜನಗಳಿಗೆ ಸಂಘದ ಸದಸ್ಯರಿಗೆ ಗೊಂದಲ ಮೂಡಿಸಿದ್ದಾರೆ. ಈ ಬಗ್ಗೆ ತಾಲೂಕಿನ ತಹಸೀಲ್ದಾರ್ ಅವರಿಗೆ 20ಕ್ಕೂ ಹೆಚ್ಚು ಸಂಘದ ಸದಸ್ಯರು ಸಹಿ ಮಾಡಿ ಲಿಖಿತ ದೂರನ್ನು ನೀಡಿದ್ದಾರೆ ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಿ ಸಂಘದ ಸದಸ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದಾರೆ. ಯಥಾಪ್ರತಿಯನ್ನು ಮುಖ್ಯಮಂತ್ರಿಯವರಿಗೂ ಕಳುಹಿಸಲಾಗಿದೆ.

Search