Posted on 13-01-2025 |
Share: Facebook | X | Whatsapp | Instagram
ಅಕ್ಷರ ರೆಸಿಡೆನ್ಷಿಯಲ್ ಸ್ಕೂಲ್ ಜೆಸಿಐ ಶಿಕಾರಿಪುರ ಚಂದನ ಹಾಗೂ ರೆಡ್ ಕ್ರಾಸ್ ಸಂಜೀವಿನಿ ರತ್ನದ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ || ದಯಾನಂದ್ ಹಾಗೂ ಜೆಸಿಐ ಶಿಕಾರಿಪುರ ಚಂದನ ಘಟಕದ ಅಧ್ಯಕ್ಷರಾದ ಪ್ರಶಾಂತ್ ಪ್ರತಿಬಿಂಬ, ಉಪಾಧ್ಯಕ್ಷರಾದ ಶಾಂತರಾಮ್ ಶೇಟ್, ಸದಸ್ಯರಾದ ಶರತ್, ಇವರು ರಕ್ತದಾನ ಮಾಡಿದರು.
ಶಿಬಿರದಲ್ಲಿ 35 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಅಕ್ಷರ ಶಾಲೆಯ ಡಿ. ರವಿಕುಮಾರ್ ಪ್ರಾಂಶುಪಾಲರಾದ ನಾಗರಾಜ್ ಗೋನಾಲ್, ಸಂಜೀವಿನಿ ರೆಡ್ ಕ್ರಾಸ್ ಪ್ರತಿನಿಧಿ ಧರಣೇಂದ್ರ ದಿನಕರ್ ಹಾಗೂ ವೈದ್ಯರಾದ ದಿನಕರ್, ಪಿ ಆರ್ ಓ ಶ್ರುತಿ ವೆಂಕಟೇಶ್, ಜೇಸಿಐ ಶಿಕಾರಿಪುರ ಚಂದನ ಘಟಕದ ಸದಸ್ಯರಾದ ನಾಗರಾಜ್ ಎಮ್, ಬಿ, ಶಿವಯ್ಯ ಶಾಸ್ತ್ರಿ, ಘಟಕದ ಖಜಾಂಚಿ ಹದಡಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.