Posted on 11-01-2025 |
Share: Facebook | X | Whatsapp | Instagram
ಶಿವಮೊಗ್ಗ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಒಪ್ಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ತಿಂಗಳಿಗೆ 10,000 ನಿಶ್ಚಿತ ಗೌರವ ಧನ ನೀಡಲು ಒಪ್ಪಿರುವುದಕ್ಕೆ ಸಮುದಾಯ ಶಿವಮೊಗ್ಗ ಹರುಷ ವ್ಯಕ್ತಿ ಪಡಿಸಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದೆ.
ಪ್ರತಿಯೊಂದು ಜಿಲ್ಲೆಯಲ್ಲೂ ಕೂಡ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣೀ ಸತ್ಯಾಗ್ರಹ ಮಾಡಿದ್ದು ಬೆಂಗಳೂರಿನಲ್ಲಿ ನಾಲ್ಕು ದಿನ ಸತ್ಯಾಗ್ರಹ ನಡೆದು ಸರ್ಕಾರ ಇವರ ಬೇಡಿಕೆಗೆ ಸ್ಪಂದಿಸಿದ್ದಕ್ಕೆ ಸಾಹಿತ್ಯ ಸಮುದಾಯದ ಅಧ್ಯಕ್ಷರಾದ ಪ್ರಭಾಕರ್ ರವರು ಹಾಗೂ ಸಮುದಾಯದ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ಕೆ. ಜಿ. ವೆಂಕಟೇಶ್ ಕೆ. ಲಕ್ಷ್ಮಿ ನಾರಾಯಣರಾವ್ ಮುಖ್ಯಮಂತ್ರಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸೇರಿಕೊಂಡು ಬೆಂಬಲ ನೀಡಿದ್ದ ಸಾಹಿತ್ಯ ಸಮುದಾಯವು ಬೆಂಗಳೂರಿಗೆ ತೆರಳಿ ಹೋರಾಟದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೂ ಸಭೆಯಲ್ಲಿ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಕಾರ್ಯದರ್ಶಿ ಡಿ ನಾಗಲಕ್ಷ್ಮಿ ಶಿಕ್ಷಣ ತಜ್ಞ ವಿ.ಪಿ. ನಿರಂಜನರಾಧ್ಯ ಹಾಗೂ ಸಚಿವ ದಿನೇಶ್ ಗುಂಡೂರಾವ್ ಮತ್ತು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಈಗ 8000 ದೊರೆಯುತ್ತಿದೆ ಅವರು ಮಾಡಿದ ಕೆಲಸದ ಅನ್ವಯ ಭತ್ಯೆ ಸಿಗುತ್ತಿದೆ ಒಂದು ವೇಳೆ 10000 ಆಗಲೇ ಇದ್ದರೆ ಬಾಕಿ ಮೊತ್ತವನ್ನು ಸರ್ಕಾರವೇ ಸಲ್ಲಿಸಿ ಹತ್ತು ಸಾವಿರ ಮಾಡಿ ಮಾಸಿಕ ಕೊಡುತ್ತದೆ ಇದರಿಂದ ಆಶಾ ಕಾರ್ಯಕರ್ತೆಯರು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.