Posted on 10-01-2025 |
Share: Facebook | X | Whatsapp | Instagram
ಈ ಶಾಲಾ ಕಟ್ಟಡವು ಪುರಸಭೆಯ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿ ಕಟ್ಟಲಾಗಿದೆ. ಇದರಿಂದ ಅನಾಹುತ ಆಗುವ ಸಂದರ್ಭವಿದ್ದು ಯಾವುದೇ ಸಂದರ್ಭದಲ್ಲಿ ಕಟ್ಟಡ ಬಿದ್ದು ದೊಡ್ಡ ಅನಾಹುತ ಸಂಭವಿಸಬಹುದು. ಶಾಲೆಯ ಕಟ್ಟಡದ ಮುಂದೆ ಇರುವ ಸರ್ಕಾರಿ ರಸ್ತೆಯಲ್ಲಿ ಬೆಳಿಗ್ಗೆ 9:00 ರಿಂದ ಸಂಜೆ 6 ರವರೆಗೆ ಶಾಲೆಯ ಬಸ್ಸುಗಳು ಮತ್ತು ಶಾಲಾ ಶಿಕ್ಷಕ ಶಿಕ್ಷಕಿಯಾದ ಚಕ್ರವಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿರುತ್ತಾರೆ ಇದರಿಂದ ಯಾವಾಗಲೂ ಟ್ರಾಫಿಕ್ ಜಾಮ್ ಆಗಿರುತ್ತದೆ ಶಿಕಾರಿಪುರ ಆಸ್ಪತ್ರೆಗೆ ಬಂದು ಹೋಗುವ ರೋಗಿಗಳಿಗೆ ಅತಿಹೆಚ್ಚಿನ ತೊಂದರೆಯಾಗುತ್ತದೆ ಈ ಎಲ್ಲ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಪುರಸಭೆ ಮತ್ತು ಶಿಕ್ಷಣ ಇಲಾಖೆ ಶಾಲೆಗೆ ಭೇಟಿಕೊಟ್ಟು ಮಾಲೀಕರ ಬಳಿಯಲ್ಲಿ ದಾಖಲೆಗಳನ್ನು ಪಡೆಯಬೇಕು ದಾಖಲೆಗಳು ಇಲ್ಲದೆ ಹೋದಲ್ಲಿ ಅವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಗಿದೆ.
ಈ ಮನವಿಯನ್ನು ಮುಖ್ಯಮಂತ್ರಿಗಳಿಗೆ ಶಿಕ್ಷಣ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳಿಗೆ ಉಪ ವಿಭಾಗಾಧಿಕಾರಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪುರಸಭೆಯ ಮುಖ್ಯ ಅಧಿಕಾರಿಗಳಿಗೆ ನೀಡಿದ್ದು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ನಾಗರಿಕರಾದ ಭಂಡಾರಿ ಮಾಲತೇಶ ಶಶಿಧರ ನಾಸಿರ್ ಖಲೀಲ್ ಅಹ್ಮದ್ ರಿಜ್ವಾನ ಅಹಮದ್ ಮುಂತಾದವರು ಮನವಿಗೆ ಸಹಿ ಹಾಕಿ ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.