ಶಿಕಾರಿಪುರದಲ್ಲಿ ಆಪರೇಷನ್ ಡಾಗ್ ಕಾರ್ಯಾಚರಣೆ:

Shikaripura Local

Posted on 12-07-2025 |

Share: Facebook | X | Whatsapp | Instagram


ಶಿಕಾರಿಪುರದಲ್ಲಿ ಆಪರೇಷನ್ ಡಾಗ್ ಕಾರ್ಯಾಚರಣೆ:

ಶಿಕಾರಿಪುರದಲ್ಲಿ ಆಪರೇಷನ್ ಡಾಗ್ ಕಾರ್ಯಾಚರಣೆ:

 ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾದ ಹಿನ್ನೆಲೆ. ಶಿಕಾರಿಪುರ ಪುರಸಭೆಯಿಂದ ಕಾರ್ಯಾಚರಣೆ.

ಶಿಕಾರಿಪುರ:  ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ನಾಗರೀಕರ  ಆರೋಗ್ಯದ ಹಿತ ದೃಷ್ಟಿಯಿಂದ ಶಾಲಾ ಕಾಲೇಜು ಮಕ್ಕಳು, ಸಾರ್ವಜನಿಕರು ,ಸಾಕು ಪ್ರಾಣಿಗಳ ಮೇಲೆ ಬೀದಿ ನಾಯಿಗಳಿಂದ  ದಾಳಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಶಿಕಾರಿಪುರ ಪುರಸಭೆಯ ವತಿಯಿಂದ ಸಂತಾನ ಹರಣ ಶಸ್ತ್ರಚಿಕಿತ್ಸಾ ಕಾರ್ಯಕ್ರಮವನ್ನು ಜಿಲ್ಲಾ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಅಧಿಕಾರಿಗಳ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಬೀದಿ ನಾಯಿಗಳ ಅವಳಿಯಿಂದ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಸಾರ್ವಜನಿಕರು  ಓಡಾಡಲು  ಭಯಪಡುವ ವಾತಾವರಣವಿತ್ತು. ಇದನ್ನು ಮನಗಂಡು ಪುರಸಭೆಯು ಎಲ್ಲಾ ಮುಂಜಾಗ್ರತ ಕ್ರಮವಹಿಸಿ ಈ ಬಾರಿ ಮೊದಲ ಹಂತದಲ್ಲಿ 500 ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಹಮ್ಮಿಕೊಳ್ಳಲು ಜಿಲ್ಲಾ ಪಶು ಪಾಲನಾ ಇಲಾಖೆಗೆ  ಮುಂಗಡವಾಗಿ  ಹಣ ಪಾವತಿಸಲಾಗಿರುತ್ತದೆ. ಹಾಗೂ ಪ್ರತಿ ನಾಯಿ ಹಿಡಿಯುವ ಕಾರ್ಯ ಚರಣಗೆ ಮತ್ತು  ಚಿಕಿತ್ಸಾ ನಂತರದ  ನಿರ್ವಹಣೆಗಾಗಿ ನುರಿತ ಬೀದಿ ನಾಯಿ ಹಿಡಿಯುವ ತಂಡವನ್ನು ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರು ಬೀದಿ ನಾಯಿಗಳಿಗೆ ಬಿಸ್ಕೆಟ್, ಮಾಂಸಹಾರ ಸೇರಿದಂತೆ ಇತರೆ  ಯಾವುದೇ ಆಹಾರ  ಪದಾರ್ಥಗಳನ್ನ ಬೀದಿಗಳಲ್ಲಿ ಬರುವ  ಬೀದಿ ನಾಯಿಗಳಿಗೆ ಆಹಾರ ಹಾಕದಂತೆ ಪುರಸಭೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ*

Search