ಸಂಚಾರಿ ಕುರಿಗಾಹಿಗಳಿಗೆ ಐಡಿ ಕಾರ್ಡ್ ವಿತರಣೆ

Social Program Farmers

Posted on 16-04-2025 |

Share: Facebook | X | Whatsapp | Instagram


ಸಂಚಾರಿ ಕುರಿಗಾಹಿಗಳಿಗೆ ಐಡಿ ಕಾರ್ಡ್ ವಿತರಣೆ

ಸಂಚಾರಿ ಕುರಿಗಾಹಿಗಳಿಗೆ ಐಡಿ ಕಾರ್ಡ್ ವಿತರಣೆ

ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರ ನೇತೃತ್ವದಲ್ಲಿ ಇಂದು ವಲಸೆ ಕುರಿಗಾಹಿಗಳಿಗೆ ಸರ್ಕಾರದ ವತಿಯಿಂದ ಐಡಿ ಕಾರ್ಡ್ಗಳನ್ನು ವಿತರಿಸಲಾಯಿತು. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಲಸೆ ಕುರಿಗಾಹಿಗಳ ಮೇಲಾಗುತ್ತಿರುವ ದೌರ್ಜನ್ಯ ತಡೆಯಲು ದಿನಾಂಕ 25/06/2024ರಂದು ವಿಧಾನಸೌಧದಲ್ಲಿ ಕುರಿಗಾಹಿಗಳೊಟ್ಟಿಗೆ ಚರ್ಚಿಸಲಾಗಿತ್ತು. ಇದೀಗ ಕುರಿಗಾಹಿಗಳ ರಕ್ಷಣೆಗೆಂದು ಸರ್ಕಾರದ ವತಿಯಿಂದ ಐಡಿ ಕಾರ್ಡ್ಗಳನ್ನು ವಿತರಿಸಲಾಗುತ್ತಿದೆ. ಶಿವಮೊಗ್ಗದಲ್ಲೂ ಸಹ ಕುರಿ ಸಂಘಗಳ ಮಹಾಮಂಡಳದ ಜಿಲ್ಲಾ ನಿರ್ದೇಶಕರಾಗಿರುವ ಜೋಗಿ ಜಯಪ್ಪ, KSWDCL ಸಹಾಯಕ ನಿರ್ದೇಶಕರಾದ ರಾಜೇಶ್, ಹಾರೋಗೊಪ್ಪ ಉಮೇಶ್ ರೆಡ್ಡಿ ಮತ್ತಿತರರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ವಲಸೆ ಕುರಿಗಾಹಿಗಳಿಗೆ ಐಡಿ ಕಾರ್ಡ್ಗಳನ್ನು ವಿತರಿಸಿದರು. ಅಲ್ಲದೇ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಕೂಡ ಐಡಿ ಕಾರ್ಡ್ ಪಡೆದಿರುವ ವಲಸೆ ಕುರಿಗಾಹಿಗಳಿಗೆ ಬಂದೂಕು ತರಬೇತಿ ನೀಡಲು ಸಮ್ಮತಿಸಿದ್ದಾರೆ.

Search